ಮೂಲಮಂತ್ರಂತೂಪದೇಶೇತ್ತತೋ ಲಿಂಗಂ ಪ್ರದಾಪಯೇತ್|
ಶ್ರೇಷಾಣಿ ಸರ್ವಕರ್ಮಾಣಿ ದೀಕ್ಷಾದ್ಪ್ರೋಕ್ತ ಕ್ರಮಾಚ್ಚರೇತ್ ||
ಇಂತೆಂದುದಾಗಿ,
ಸಮಸ್ತ ಮಂತಂಗಳಿಗೆ ಮೂಲಮಪ್ಪ ಪಂಚಾಕ್ಷರ ಮಂತ್ರವನುಪದೇಶಿಸುವುದು.
ಆ ಮಂತ್ರೋಪದೇಶದ ತರುವಾಯಲ್ಲಿ ಶಿಷ್ಯಂಗೆ ಪ್ರಾಣಲಿಂಗೋಪದೇಶಮಂ ಮಾಡುವುದು.
[ಉ] ಳಿದ ಸಮಸ್ತ ಕ್ರಿಯೆಗಳಂ ವೀರಶೈವ ದೀಕ್ಷಾಮಾರ್ಗದಲ್ಲಿ ಹೇಳಲ್ಪಟ್ಟ ಕ್ರಮದಲ್ಲಿ
ಚರಿಸುವುದಯ್ಯಾ ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
Mūlamantrantūpadēśēttatō liṅgaṁ pradāpayēt|
śrēṣāṇi sarvakarmāṇi dīkṣādprōkta kramāccarēt ||
intendudāgi,
samasta mantaṅgaḷige mūlamappa pan̄cākṣara mantravanupadēśisuvudu.
Ā mantrōpadēśada taruvāyalli śiṣyaṅge prāṇaliṅgōpadēśamaṁ māḍuvudu.
[U] ḷida samasta kriyegaḷaṁ vīraśaiva dīkṣāmārgadalli hēḷalpaṭṭa kramadalli
carisuvudayyā śāntavīraprabhuvē.