Index   ವಚನ - 75    Search  
 
ಬಳಿಕಾ ಮಂತ್ರಗಳ ವಾಚ್ಯ ವಾಚಕ ಸಂಬಂಧವರಿದು, ಮೇಲೆ ಪಂಚಬ್ರಹ್ಮ ಷಡಂಗಂಗಳೆ ಪ್ರಥಮಾವರಣ, ಅನಂತಾದ್ಯಷ್ಟ ವಿದ್ಯೇಶ್ವರರೆರಡನೆ ಯಾವರಣ, ಉಮೆ ಚಂಡೀಶ್ವರ ನಂದಿಕೇಶ್ವರ ಮಹಾಕಾಳ ಭೃಂಗಿರಿಟಿ ಗಣಪತಿ ವೃಷಭ ಷಣ್ಮುಖರೆಂಬ ಅಷ್ಟಗವೀಶ್ವರರೆ ಮೂರನೆಯಾವರಣ, ಇಂದ್ರಾದಿ ಲೋಕಪಾಲಾಷ್ಟಕರು ಬ್ರಹ್ಮವಿಷ್ಣುಗಳು ನಾಲ್ಕನೆಯಾವರಣ, ವಜ್ರಾದಿ ದ್ಪಚಕ್ರಂಗಳೆಂಬ ದಶಾಯುಧಂಗಳೈನೆಯಾವರಣ, ಬ್ರಾಹ್ಮಾದಿ ಸಪ್ತಮಾತೃಕೆಯ ರಾರನೆಯಾವರಣ, ಅಷ್ಟವಸುಗಳೇಳನೆಯಾವರಣ, ಏಕಾ ದಶರುದ್ರರೆಂಟನೆ ಯಾವರಣ, ಆದಿತ್ಯಾದಿ ನವಗ್ರಹಂಗಳೊಂಬತ್ತನೆ ಯಾವರಣವಹುದಾಗಿ, ಪಂಚಾಕ್ಷರಾದಿ ಮಂತ್ರಾಧಿದೇವತೆಯನಾವರಣ ಸಹಿತಮಾಗಾದರೂ, ನಿರಾ ವರಣಮಾಗಾದರೂ ಧ್ಯಾನಿಸುತ್ತೆ ಜಪಿಸೂದಾ ಧ್ಯಾನದಲ್ಲಿ ಅಭಿಚಾರ ಗ್ರಹೋ ಚ್ಚಾಟನಾದಿಗಳಿಗೆ ಕೃಷ್ಣವರ್ಣರೂಪದಿಂ, ಮುಕ್ತ್ಯಾದಿಗಳಿಗೆ ಶುಕ್ರವರ್ಣ ರೂಪದಿಂ ಧ್ಯಾನಿಸೂದಯ್ಯ ಶಾಂತವೀರೇಶ್ವರಾ.