ಮತ್ತಮಾ ಮಂತ್ರಂಗಳಿಂ ಕರನ್ಯಾಸ ದೇಹನ್ಯಾಸ ಅಂಗನ್ಯಾಸಮೆಂಬ
ನ್ಯಾಸತ್ರಯಂಗಳ ಉತ್ಪತ್ತಿ ಸ್ಥಿತಿ ಸಂಹಾರ ಭೇದಂಗಂಳಂ ಪೂರ್ವೋಕ್ತ ಕ್ರಮ
ದಿಂದರಿದು ವಿಸ್ತರಿಸುವದರಲ್ಲಿ ಗೃಹಸ್ಥಂಗೆ ಮುತ್ತೈದೆ ವಿಧವೆಯರಿಗೆ ಸ್ಥಿತಿನ್ಯಾಸ
ವಹುದು, ಬ್ರಹ್ಮಚಾರಿಗೆ ಉತ್ಪನ್ಯಾಸವಹುದು, ವಾನಪ್ರಸ್ಥ ಯತಿಗಳಿಗೆ ಸಂಹಾರ
ನ್ಯಾಸ ವಹದೆಂದನುವದಿಸಿ, ಬಳಿಕ ಅಗುಷ್ಠದಿಂ ಮೋಕ್ಷ, ತರ್ಜನಿಯಿಂ ಶತ್ರು
ಹಾನಿ, ಮಧ್ಯಾಂಗುಲಿಯಿಂದರ್ಥಸಿದ್ಥಿ, ಅನಾಮಿಕೆಯಿಂ ಶಾಂತಿ, ಕನಿಷ್ಠದಿಂ
ರಕ್ಷಣೆಗಳಪ್ಪವಲ್ಲಿ, ಮಧ್ಯಾಂಗುಷ್ಠ ಯೋಗದಿಂ ಮಾಲಿಕೆಯಂ ಪಿಡಿದು
ಜಪಂಗೆಯ್ವುದೆ ಕನಿಷ್ಠವೆನಿಸೂದು. ತರ್ಜನ್ಯಂಗುಷ್ಠ ಯೋಗದಿಂ ಜಪಿಸೂದೆ
ಮಧ್ಯಮವೆನಿಸೂದು. ಅನಾಮ್ಯಂಗುಷ್ಠ ಯೋಗದಿಂ ಜಪಂಗೆಯ್ವುದೆ ಉತ್ತಮ
ವೆನಿಸೂದು. ಬಳಿಕಲ್ಲಿ ಮಧ್ಯಾಂಗುಷ್ಠಂಗಳಿಂ ಭಾಷ್ಯಜಪಂಗೆಯು, ತರ್ಜನ್ಯಂ
ಗುಷ್ಠಂಗಳಿಂದುಪಾಂಶು ಜಪಂಗೆಯ್ವುದು, ಅನಾಮಿಕೆ ಮಧ್ಯಾಂಗುಷ್ಠಂಗಳಿಂ
ಮಾನಸೆಜಪಂಗೆಯ್ವುದವರ ಅಲ್ಲಿ ಪರಶ್ರುತಿ ಗೋಚರವಪ್ಪುದೆ ಉಚ್ಚರಿಪುದೆ
ವಾಚಕವಹುದು, ಸ್ವಶ್ರುತಿಸಾರವಾಗಿ ಓಷ್ಟ ಸ್ಪಂದನಮಾಗುಚ್ಚರಿಪುದೆ
ಉಪಾಂಶುವಹುದು, ಮಂತ್ರವಾಕ್ಯಾರ್ಥಚಿಂತನಂಗೆಯ್ವುದೆ ಮಾನಸವಹುದು.
ಅವರೊಳಗೆ ವಾಚಕಜಪವೆ ಕ್ಷುದ್ರಕಾರ್ಯಂಗಳಿಗೆ, ಉಪಾಂಶುಜಪವೆ ಸಕಲಸಿದ್ಧಿ
ಗಳಿಗೆ, ಮಾನಸಜಪವೆ ಮುಕ್ತಿಗಹುದೆಂದು ನಿಯಾಮಿಸಿ ಜಪಂಗೆಯ್ವುದಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Mattamā mantraṅgaḷiṁ karan'yāsa dēhan'yāsa aṅgan'yāsamemba
n'yāsatrayaṅgaḷa utpatti sthiti sanhāra bhēdaṅganḷaṁ pūrvōkta krama
dindaridu vistarisuvadaralli gr̥hasthaṅge muttaide vidhaveyarige sthitin'yāsa
vahudu, brahmacārige utpan'yāsavahudu, vānaprastha yatigaḷige sanhāra
n'yāsa vahadendanuvadisi, baḷika aguṣṭhadiṁ mōkṣa, tarjaniyiṁ śatru
hāni, madhyāṅguliyindarthasidthi, anāmikeyiṁ śānti, kaniṣṭhadiṁ
Rakṣaṇegaḷappavalli, madhyāṅguṣṭha yōgadiṁ mālikeyaṁ piḍidu
japaṅgeyvude kaniṣṭhavenisūdu. Tarjan'yaṅguṣṭha yōgadiṁ japisūde
madhyamavenisūdu. Anāmyaṅguṣṭha yōgadiṁ japaṅgeyvude uttama
venisūdu. Baḷikalli madhyāṅguṣṭhaṅgaḷiṁ bhāṣyajapaṅgeyu, tarjan'yaṁ
guṣṭhaṅgaḷindupānśu japaṅgeyvudu, anāmike madhyāṅguṣṭhaṅgaḷiṁ
mānasejapaṅgeyvudavara alli paraśruti gōcaravappude uccaripudeVācakavahudu, svaśrutisāravāgi ōṣṭa spandanamāguccaripude
upānśuvahudu, mantravākyārthacintanaṅgeyvude mānasavahudu.
Avaroḷage vācakajapave kṣudrakāryaṅgaḷige, upānśujapave sakalasid'dhi
gaḷige, mānasajapave muktigahudendu niyāmisi japaṅgeyvudayya
śāntavīrēśvarā.