ಬಳಿಕಾ ಮಂತ್ರಂಗಳಿಗೆ ಆತ್ಮಗರ್ಭ ಶಿವಗರ್ಭ ಶಕ್ತಿಗರ್ಭ ಗರ್ಭತ್ರಯ
ಯುಂಟವರಲ್ಲಿ ಆತ್ಮಗರ್ಭಮಾಗೆ ಸುಪ್ತಲೀಲಾ ಸಮರ್ಥವಹುದು, ಶಿವಗರ್ಭ
ಮಾಗೆ ನಪುಂಸವಹುದು, ಶಕ್ತಿಗರ್ಭಮಾಗೆ ಭುಕ್ತಿ ಮುಕ್ತಿಪ್ರದವಹುದೆಂದೀ
ಕ್ರಮವರಿದಿಂತು ವಿದ್ಯುಕ್ತಮಾಗಿ ಜಪಂಗೆಯ್ದು, ಜಪಸಮಾಪ್ತಿಯಾದ
ಮೇಲೆಯೂ ಪೂರ್ವೋಕ್ತಮಾದ ವಿಧಿಗೆ ವಿಪರೀತಮಾದ ಪ್ರಾಣಾಯಾಮ
ತ್ರಯದಿಂದ ಮೊದಲಂತೆ ಛಂದೃಷಿ ದೇವತಾದಿಗಳಿಂ ವಿಧಿಸಿ, ಸ್ಮರಿಸಬೇಕೆಂದು
ವಿಧಿಸಿ, ಬಳಿಕೀ ಮಂತ್ರಾದಿ ಸಕಲ ಕ್ರಿಯೆಗಳಂ ಶ್ರೀಗುರೂಪದೇಶದಿಂದ
ಭ್ಯಾಸಂಗೆಯ್ಯೆ, ಸರ್ವಾರ್ಥಸ್ಥಿಯಹುದಲ್ಲದೆ ಯುಕ್ತಿಶಾಸ್ತ್ರದಿಂದನುಷ್ಟಿಸ
ಲಾಗದೆಂದು ದೃಢವಿಡಿದು, ಅನಂತ[ರ]ದೊಳಿಂತು ಭಸಿತ ರುದ್ರಾಕ್ಷ
ಪಂಚಾಕ್ಷರ ಮಂತ್ರವಿಧಾನಸಿದ್ಧನಾದ ಶುದ್ಧಶೈವಂಗೆ ಶಿವಾರ್ಚನವೆ ಕರ್ತವ್ಯ
ವಹುದಲ್ಲಿ ಮೂಲಾಭಿಷೇಚನದಿಂ ತರುಶಾಖೋಪಶಾಖಾದಿಕವೆಲ್ಲಂ ಪಲ್ಲವಿಸು
ವಂತೆ, ಪ್ರಾಣೋಪಹಾರದಿಂ ಸಕಲೇಂದ್ರಿಯ ಸಮೂಹವೆಲ್ಲಂ ಪರಿಪೋಷಿಸು
ವಂತೆ, ಶಿವಾರ್ಚನಮೊಂದರಿಂದಖಿಳ ದೇವತಾಸಂತುಷ್ಟಿಯಹುದಾಗಿ, ಚಂದ್ರ
ಸೂರ್ಯ ಮಂಡಲವಹ್ನಿ ಗಂಗಾಸ್ಥಡಿಲ ಕಲಶ ಮಸ್ತಕ ಸಾಲಗ್ರಾಮಾದಿ ಪೂಜಾ
ಸ್ಥಾನಂಗಳೊಳಗೆ ಲಿಂಗಾಧಿಷ್ಠಾನವೆ ಮಹಾವಿಶೇಷವೆಂದು ಶಿಲಾಮಯ
ಲಿಂಗವನೆ ಬ್ರಹ್ಮನು, ಇಂದ್ರನೀಲಮಯ ಲಿಂಗವನೆ ವಿಷ್ಣು, ರತ್ನಮಯ
ಲಿಂಗವನೆ, ಇಂದ್ರನು, ಸುವರ್ಣಮಯ ಲಿಂಗವನೆ ಕುಬೇರನು, ರಜತಮಯ
ಲಿಂಗವನೆ ವಿಶ್ವದೇವರ್ಕಳು, ಪಿತ್ತಳಮಯ ಲಿಂಗವನೆ ವಾಯು, ಕಾಂಸ್ಯಮಯ
ಲಿಂಗವನೆ ವಸುಗಳು, ಮೃಣ್ಮಯ ಲಿಂಗವನೆ ಅಶ್ವಿನಿದೇವರ್ಕಳು, ಸ್ಫಟಿಕಮಯ
ಲಿಂಗವನೆ ವರುಣನು, ಅನ್ನಮಯ ಲಿಂಗವನೆ ಅಗ್ನಿ, ತಾಮ್ರಮಯ ಲಿಂಗವನೆ
ಸೂರ್ಯನು, ಮುಕ್ತಾ ಫಳಮಯ ಲಿಂಗವನೆ ಚಂದ್ರನು, ಮಣಿಮಯಲಿಂಗ
ಬಹುವರ್ಣದ ಲಿಂಗವನೆ ನಕ್ಷತ್ರಗಳು, ಮಣಿಮಯ ಲಿಂಗವನೆ ಬುಧನು,
ಕಾರ್ಭೊನ್ನಲಿಂಗವನೆ ಶುಕ್ರನು, ವಿದ್ರುಮದ ಲಿಂಗವನೆ ಮಂಗಳನು,
ಮಾಣಿಕ್ಯದ ಲಿಂಗವನೆ ಬೃಹಸ್ಪತಿ, ತಾಮ್ರಲಿಂಗವನೆ ಶನಿ, ಕುಶಮಯ
ಲಿಂಗವನೆ ಸಪ್ತಋಷಿಗಳು, ನೀಲದ ಲಿಂಗವನೆ ಧ್ರುವನು, ಸ್ಥಾಣುನಾಮ
ಲಿಂಗವನೆ ಮಾರ್ಕಂಡೇಯನು, ದರ್ಭಾಮಯ ಲಿಂಗವನೆ ಪಿಶಾಚರು,
ತ್ರಿಲೋಹಮಯ ಲಿಂಗವನೆ ಗುಹ್ಯಕರು, ವಜ್ರಮಯಲಿಂಗವನೆ ಮಾತೃಕೆಗಳು,
ಪ್ರಸೂನಮಯ ಲಿಂಗವನೆ ಮನ್ಮಥನು, ನಾನಾಕಾರದ ಲಿಂಗವನೆ ಲಕ್ಷ್ಮಿ ಸರಸ್ವತಿ
ಶಚಿ ಮಾತೃಕಾದಿ ಮಹಾಶಕ್ತಿ ದೇವತೆಗಳಿಂತು ಬೇರೆ ಬೇರೆ ಲಿಂಗವನೆ ಪೂಜಿಸಿ,
ತಮ್ಮ ತಮ್ಮ ಪದಂಗಳಲ್ಲಿ ಸುಖಿಮಿರ್ಪರೆಂ[ದೊ]ಡೆ ಕೀಟಕ ಮನುಷ್ಯರೊಳವರಿ
ವರೆನ್ನದೆಲ್ಲರೂ ಸ್ವಯಂಭೂಲಿಂಗ ಬಾಣಲಿಂಗ ಚರಲಿಂಗ ಸಂಕೀರ್ಣಲಿಂಗ
ಪ್ರಾಣಲಿಂಗವೆಂಬ ಪಂಚವಿಧಲಿಂಗಂಗಳ ತಮ್ಮ ತಮ್ಮ ಶಕ್ತ್ಯಾನುಸಾರ
ಮಾದರ್ಚನಾತತ್ಪರರಾಗಲೆವೇಳ್ಕುಮೆಂಬುದನಂಗೀಕರಿಸಿ ಲಿಂಗಾರ್ಚನೆಯ
ಮಾಳುದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Baḷikā mantraṅgaḷige ātmagarbha śivagarbha śaktigarbha garbhatraya
yuṇṭavaralli ātmagarbhamāge suptalīlā samarthavahudu, śivagarbha
māge napunsavahudu, śaktigarbhamāge bhukti muktipradavahudendī
kramavaridintu vidyuktamāgi japaṅgeydu, japasamāptiyāda
mēleyū pūrvōktamāda vidhige viparītamāda prāṇāyāma
trayadinda modalante chandr̥ṣi dēvatādigaḷiṁ vidhisi, smarisabēkendu
vidhisi, baḷikī mantrādi sakala kriyegaḷaṁ śrīgurūpadēśadinda
Bhyāsaṅgeyye, sarvārthasthiyahudallade yuktiśāstradindanuṣṭisa
lāgadendu dr̥ḍhaviḍidu, ananta[ra]doḷintu bhasita rudrākṣa
pan̄cākṣara mantravidhānasid'dhanāda śud'dhaśaivaṅge śivārcanave kartavya
vahudalli mūlābhiṣēcanadiṁ taruśākhōpaśākhādikavellaṁ pallavisu
vante, prāṇōpahāradiṁ sakalēndriya samūhavellaṁ paripōṣisu
vante, śivārcanamondarindakhiḷa dēvatāsantuṣṭiyahudāgi, candra
sūrya maṇḍalavahni gaṅgāsthaḍila kalaśa mastaka sālagrāmādi pūjā
Sthānaṅgaḷoḷage liṅgādhiṣṭhānave mahāviśēṣavendu śilāmaya
liṅgavane brahmanu, indranīlamaya liṅgavane viṣṇu, ratnamaya
liṅgavane, indranu, suvarṇamaya liṅgavane kubēranu, rajatamaya
liṅgavane viśvadēvarkaḷu, pittaḷamaya liṅgavane vāyu, kānsyamaya
liṅgavane vasugaḷu, mr̥ṇmaya liṅgavane aśvinidēvarkaḷu, sphaṭikamaya
liṅgavane varuṇanu, annamaya liṅgavane agni, tāmramaya liṅgavane
sūryanu, muktā phaḷamaya liṅgavane candranu, maṇimayaliṅga
bahuvarṇada liṅgavane nakṣatragaḷu, maṇimaya liṅgavane budhanu,
Kārbhonnaliṅgavane śukranu, vidrumada liṅgavane maṅgaḷanu,
māṇikyada liṅgavane br̥haspati, tāmraliṅgavane śani, kuśamaya
liṅgavane sapta'r̥ṣigaḷu, nīlada liṅgavane dhruvanu, sthāṇunāma
liṅgavane mārkaṇḍēyanu, darbhāmaya liṅgavane piśācaru,
trilōhamaya liṅgavane guhyakaru, vajramayaliṅgavane mātr̥kegaḷu,
prasūnamaya liṅgavane manmathanu, nānākārada liṅgavane lakṣmi sarasvati
śaci mātr̥kādi mahāśakti dēvategaḷintu bēre bēre liṅgavane pūjisi,
Tam'ma tam'ma padaṅgaḷalli sukhimirpareṁ[do]ḍe kīṭaka manuṣyaroḷavari
varennadellarū svayambhūliṅga bāṇaliṅga caraliṅga saṅkīrṇaliṅga
prāṇaliṅgavemba pan̄cavidhaliṅgaṅgaḷa tam'ma tam'ma śaktyānusāra
mādarcanātatpararāgalevēḷkumembudanaṅgīkarisi liṅgārcaneya
māḷudayyā śāntavīrēśvarā.