ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ
ಸಂರೋಧನ ಸಮ್ಮುಖೀಕರಣಮೆಂಬ ಕ್ರಿಯೆಗಳಂ ಮಾಡಿ, ಬಳಿಕ ಪೂಜಾ
ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನಪಾತ್ರ
ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ರಿಯೆಗಳನೀಶ್ವರಾರ್ಪಣಂ
ಗೆಯ್ಯ ಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರ
ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಟಮಾದ ಪೂಜಾಯೋಗ್ಯ
ಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ
ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ
ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅಘ್ರ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ
ಘೃತದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ
ಕರ್ಪೂರ ಕೋಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ,
ಪಂಚಗವ್ಯಂ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ
ದ್ರವ್ಯಂಗಳಂ, ಮಂದೋಷ್ಣಾದಿ ಸ್ನಾನವಾರಿಗಳಂ, ಗಂಧೋದಕ ಪುಷ್ಪೋದಕ
ರತ್ನೋದಕ ಮಂತ್ರೋದತಂಗಳಂ, ಮಹಾಸ್ನಾನೋದಕಂಗಳು, ವಿಧಿ ನಯ
ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ
ವಸ್ತ್ರಂಗಳಂ, ಸುವರ್ಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ,
ಕಿರೀ[ಟಾ]ದ್ಯಾಭರಣಂಗಳಂ, ಚಂದನ ಅರಗು ಕಸ್ತೂರಿ ಕರ್ಪೂರ ತಮಾಲ ದಳ
ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ,
ಸಾಸಿವೆ ತಿಲ ತಂಡುಲ ಮುಕ್ತಾಫಲಾಧ್ಯಕ್ಷತೆಗಳಂ, ಶುಭ್ರರಕ್ತ ಕೃಷ್ಣವರ್ಣ
ಕ್ರಮದಿಂ ನಂದ್ಯಾದಿ ವತ್ರ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ
ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ,
ಕರಿಯ[ಗ]ರು ಬಿಳಿಯಗರು ಗುಗ್ಗುಲ ಶ್ರೀಗಂಧ ಆಗರು ಬಿಲ್ವಫಲ ತುಪ್ಪ
ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ
ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ
ಕೃಸರಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗ
ಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ
ಸಂಪಾದಿಸುವುದಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Karpūra kōṣṭa kuṅkuma yālakkiyembāru ācamana dravyaṅgaḷaṁ,
pan̄cagavyaṁ pan̄cāmr̥taṅgaḷaṁ, gōdhūma cūrṇa gandhādyudvartana
dravyaṅgaḷaṁ, mandōṣṇādi snānavārigaḷaṁ, gandhōdaka puṣpōdaka
ratnōdaka mantrōdataṅgaḷaṁ, mahāsnānōdakaṅgaḷu, vidhi naya
śubhrādi guṇayukta bhasitaṅgaḷu, pa[ṭṭe] dēvāṅga śubhra citrādi
vastraṅgaḷaṁ, suvarṇa rajata pa[ṭṭe] sūtrādi yajñōpavītaṅgaḷaṁ,
Kirī[ṭā]dyābharaṇaṅgaḷaṁ, candana aragu kastūri karpūra tamāla daḷa
kuṅkuma lāman̄ca kōṣṭaṅgaḷemba aṣṭagandhaṅgaḷaṁ, jave biḷiya,
sāsive tila taṇḍula muktāphalādhyakṣategaḷaṁ, śubhrarakta kr̥ṣṇavarṇa
kramadiṁ nandyādi vatrtādi kamalādi nīlōtpalādi sātvika rājasa
tāmasa puṣpaṅgaḷaṁ, dūrve tulasi bilvādi patrajālaṅgaḷaṁ,
kariya[ga]ru biḷiyagaru guggula śrīgandha āgaru bilvaphala tuppaJēnutuppa sajjarasa karpūravemba daśāṅga dhūpaṅgaḷaṁ, tailavarti
ghr̥takarpūravemba dīpa sādhanaṅgaḷaṁ, haridrānna paramānna mudgānna
kr̥sarānna dadhyānna guḍānnamemba ṣaḍvidhānnādi naivēdyaṅgaḷaṁ, pūga
parṇa cūrṇa karpūrādi tāmbūla dravyaṅgaḷaṁ, bēre bēre
sampādisuvudayyā śāntavīrēśvarā.