Index   ವಚನ - 87    Search  
 
...ತಮಾದ ತ್ರಿವಿಧ ಕುಂಭದೊಳೊಂದೊಂದು ರಾತ್ರೆಯಲ್ಲಿ ಪ್ರತ್ಯೇಕಮಾಗ ಷ್ಟೋತ್ತರಶತ ಪಂಚಾಕ್ಷರ ಮನುವಿಂದಭಿಮಂತ್ರಿಸುತ್ತವಗಾಹಮಿರಿಸಿ, ಬಳಿಕಾ ನಾಲ್ಕನೆಯ ರಾತ್ರೆಯೊಳಾ ಪಂಚಕಳಶ ಸ್ಥಾಪನಕ್ಕೆ ಉತ್ತರದಿಕ್ಕಿನಲ್ಲಿ ಭೂಮಿಯಂ ಪರಿಶುದ್ಧಿಗೆಯಷ್ಟಪದ್ಮಮಂ ತುಂಬಿ, ಬಳಿಕ ಏಳು ಮೊಳದುದ್ದದೊಂದು ನವೀನ ವಸ್ತ್ರಮಂ ತಂದಾ ಪದ್ಮದ ಮೇಲೊಂದು ಮೊಳದುದ್ದಮಂ ಮುಚ್ಚುತ್ತದರ ಮೇಲೊಂದಂಗುಲದ ದಟ್ಟದಲ್ಲಿ ಶ್ಯಾಮಮಂ ಪಸರಿಸುತ್ತಷ್ಟದಳನಳಿನಮಂ ಬರೆದು ವಸ್ತ್ರಮಂ ಭಾಷಣಿಸಿ, ಮತ್ತದರ ಮೇಲೆ ತಿಲಮಂ ಹರಹುತ್ತಷ್ಟದಳ ಕಮಲಮಂ ಲಿಖಿಸುತ್ತಾ ವಸ್ತ್ರಮಂ ಪೊದಿಸಿ, ಮತ್ತದರ ಮೇಲೆ ಗೋದುವೆಯಂ ಹರಹುತ್ತಷ್ಟದಳಕಮಲಮಂ ನಿರ್ಮಿಸುತ್ತಾ ವಸ್ತ್ರಮಂ ಕವಿಚಿ, ಮತ್ತದರ ಮೇಲೆ ವ್ರೀಹಿಯಂ ಪಸರಿಸುತ್ತಷ್ಟದಳಕಂಜಮಂ ರಚಿಸುತ್ತಾ ವಸ್ತ್ರಮಂ ಮುಸುಂಕಿ, ಮತ್ತದರ ಮೇಲೆ ತಂಡುಲಮಂ ಹರಹುತ್ತಷ್ಟದಳಕಂಜಮನಂಕಿಸುತ್ತಾ ವಸ್ತ್ರಮ ನಾವರಿಸಿ, ಮತ್ತದರ ಮೇಲೆ ಚೂತ ಬಿಲ್ವ ಆಮಳಕ ಕುಶ ಅಪಾಮಾರ್ಗವೆಂಬ ಪಂಚಪತ್ರೆಗಳಂ ವಿಸ್ತರಿಸುತ್ತಾ ವಸ್ತ್ರಮನಾಚ್ಛಾದಿಸಿ, ಹಿಂಗೇಳು ನೆಲೆಯಾದಾ ಧಾರಮಂ ಕಲ್ಪಿಸುತ್ತದರ ಮೇಲೆ ಆ ಲಿಂಗಸ್ಥಲಮಂ ಗೋಮುಖ ಉತ್ತರಭಾಗ ಮಪ್ಪಂತಿರಿಸಿ ಮೇಲೆ ಶ್ರೀಕಾರ ಪ್ರಾಣಾಯಾಮದಿಂ ಸಹಸ್ರಮೂಲಮಂತ್ರಮಂ ಜಪಿಸುತ್ತಾ ಲಿಂಗಸ್ಥಲಕ್ಕೆ ಮಾತೃಕಾನ್ಯಾಸ ಕಲಾನ್ಯಾಸ ಮಂತ್ರನ್ಯಾಸಾದಿಗಳಿಂ ಪ್ರಾಣ ಪ್ರತಿಷ್ಠೆಯಂ ಮಾಡಿ, ಮರಳಿ ಕಳಶೋದಕದಿಂ ಸ್ನಾನಂಗೆಯ್ದಷ್ಟ ವಿಧಾರ್ಚನೆಯಂ ಮಾಡಿಂತು ಮುನ್ನವೆ ಪರಿಶು...ವಡೆದಿರ್ದ ಲಿಂಗಸ್ಥಲವನಾ ಚಾರ್ಯಂ ತನ್ನ ವಾಮಕರಸ್ಥಲಕ್ಕೆ ಬಿಜಯಂಗೆಯ್ಸಿಕೊಂಡು, ಬಳಿಕ್ಕದರೊಳಾ ಪೂರ್ವೋಕ್ತಕ್ರಮದಿಂ ದೃಷ್ಟಿಸ್ಥಿತ ಶಿವಕಲಾ ಪ್ರತಿಷ್ಠೆಯಂ ಮಾಡಿ, ಮತ್ತಾ ಶಿಷ್ಯನ ``ಅಯಂ ಮೇ ಹಸ್ತೋ ಭಗವಾನೆಂಬ'' ಶ್ರುತಿಸಿದ್ಧಮಾದ ವಾಮಹಸ್ತಪೀಠ ದೊಳಾ ಶಿವಲಿಂಗಮಂ ಗೋಮುಖಭಾಗವಪ್ಪಂತೆ ಸಂಸ್ಥಾಪಿಸೂದೆ ಕ್ರಿಯಾದೀಕ್ಷೆ ಎನಿಸೂದಯ್ಯಾ ಶಾಂತವೀರೇಶ್ವರಾ.