Index   ವಚನ - 88    Search  
 
ಬಳಿಕ ಕ್ರಿ....ತನ್ನ ಶಿಷ್ಯನ ಕರೆದೆಲೆ ಮಗನೆ ನಿನ್ನ ಪ್ರಾ[ಣ]ಲಿಂಗವಿದು ತಾನೆ, ತತ್ವಾತೀತಮಾದ ಪರವಸ್ತುವಿದು ತಾನೆ, ಹರಿಬ್ರಹ್ಮರರಸಿ ಕಾಣದ ನಿಜತತ್ವವಿದ ನಿನ್ನು ನಿಮಿ...ರ್ಧಮಾದರೂ ನಿನ್ನ ಶರೀರದಿಂ ವಿಯೋಗಮಾಗದಂತೆ ಸಾವಧಾನದಿಂ ಧರಿಸು, ತ್ರಿಕಾಲಂ ತಪ್ಪದರ್ಚಿಸುತ್ತಿರು, ಲಿಂಗಾರ್ಪಿತವಲ್ಲ ದೇನೊಂದನು ಸ್ವೀಕರಿಸದಿರು, ಸಕಲಭೋಗಮೋಕ್ಷಂಗಳೆಲ್ಲಾ...ಸಾರಿದವೆಂದು ನಂಬು, ಸರ್ವ ಕ್ಲೇಶಮಂ ಬಿಡು, ನಿತ್ಯಸುಖಿಯಾಗು, ಸತ್ಯಮಿದೆಂಬಿವು ಮೊದ ಲಾದ ಶಿವಕ್ರಿಯೆಗಳನುಪದೇಶಂಗೆಯ್ದುಂತು ಪೇಳ್ವ ವೀರಶೈವದೀಕ್ಷೆಯಾದೊಡೆ ಆಜ್ಞಾದೀಕ್ಷೆ ಉಪ[ಮಾ]ದೀಕ್ಷೆ, ಸ್ವಸ್ಥಿಕಾರೋಹಣ, ಕಳಶಾಭಿಷೇಕ, ವಿಭೂತಿಯ ಪಟ್ಟ, ಲಿಂಗಾಯತ, ಲಿಂಗಸ್ವಾಯತಮೆಂದು ಸಪ್ತವಿಧಮಾಗಿಹುದವರಲ್ಲಿ ಶ್ರೀಗುರು ತನ್ನಾಜ್ಞೆಯನೆ ಶಿಷ್ಯನಲ್ಲಿ ಪ್ರತಿಪಾದಿಸೊದೆ ಆಜ್ಞಾದೀಕ್ಷೆ ಎನಿಸೂದು. ಪುರಾತನ ಸಮಯಾಚಾರಕ್ಕೆ ಸದೃಶಮಾಗಿ ಮಾಡೂದೆ ಉಪಮಾದೀಕ್ಷೆ ಎನಿಸೂದು. ಸ್ವಸ್ತಿಕಮೆಂಬ ಮಂಡಲದ ಮೇಲೆ ಶಿಷ್ಯನಂ ಕುಳ್ಳಿರಿಸಿ ಮಂತ್ರ ನ್ಯಾಸಾದಿಗಳಂ ಮಾಡಿ ಮಂತ್ರಶರೀರಿ ಎನಿಸೂದೆ ಸ್ವಸ್ತಿಕಾರೋಣವೆನಿಸೂದು. ಪಂಚಕಳಶೋದಕಂಗಳಿಂ ಶಿಷ್ಯಂಗೆ ಸ್ನಪನಂಗೆಯ್ವುದೆ ಕಳಶಾಭಿಷೇಕವೆನಿ ಸೂದು. ಆಗಮೋಕ್ತಸ್ಥಾನಂಗಳಲ್ಲಿ ತತ್ತನ್ಮಂತ್ರಂಗಳಿಂ ಶ್ರೀವಿಭೂತಿ ಧಾರಣಂ ಗೆಯ್ವುದೆ ವಿಭೂತಿಯ ಪಟ್ಟವೆನಿಸೂದು. ಆಚಾರ್ಯಂ ತಾನೂ ಶಿಷ್ಯಂಗೆ ಕೊಡಲುತಕ್ಕ ಲಿಂಗವನರ್ಚಿಸಿ ಶಿಷ್ಯನಂ ನೋಡಿಸೊದೆ ಲಿಂಗಾಯತವೆನಿಸೂದು. ಆ ಶ್ರೀಗುರುವಿತ್ತ ಲಿಂಗವನೆ ಶಿಷ್ಯನು ಸಾವಧಾನದಿಂದುತ್ತಮಾಂಗಾದಿ ಸ್ಥಾನಂಗಳಲ್ಲಿ ಧರಿಸೂದೆ ಲಿಂಗಸ್ವಾಯತವೆನಿಸೂದು. ಇಂತು ಶಾಸ್ತ್ರೋಕ್ತ ಕ್ರಮದಿಂ ಸಾಂಗಿಕಮಾದ ಶಿವದೀಕ್ಷೆಯಿಂ ಲಿಂಗಾಂಗ ಸಂಬಂಧಿಯಾದ ವೀರಶೈವನು ಮಾಳ್ಪ ಶಿವಲಿಂಗ ಪೂಜಾಕ್ರಮವೆಂತೆಂದೊಡೆ: ಶ್ರೇಷ್ಠರುಗಳಾ ವಾವುದನಾಚರಿಸುವರದನೆ ಲೋಕದವರನುವರ್ತಿಪುದರಿಂ, ಜಗಕ್ಕುಪದೇಶ ಮಪ್ಪಂತೆ ತಾನು ನಿತ್ಯನಿರ್ಮಲನಾದರೂ ಮಂತ್ರನ್ಯಾಸಾ... [ಸಾಂಸ್ಥಿಕಮಾಗಿ] ಶಿವಲಿಂಗಾರ್ಚನೆಯಂ ಮಾಡುವಲ್ಲಿ ಮೊದಲು...ಳತನುಲಿಂಗುಪದೇಶಮಂ ಮಾಳ್ಪುದು. ಪದಿನೆಂಟುಕುಲ ಪ್ರವರ್ತನೆಯನಳಿದು, ಶರಣರ ಕುಲ ವನೊ.... ಶಿವಪೂಜೋಪಚಾರವೆ ತನಗೆ ಸಂಸಾರವೆನಲದುವೆ ನಿಸ್ಸಂಸಾರ ದೀಕ್ಷೆ ತ್ರಿಮಲ ಭವದೊಳು...ಲಿಂಗಾಂಗಸಮರಸವ ಮಾಳ್ಪುದೆ ತತ್ವದೀಕ್ಷೆ. ಲಿಂಗಾಂಗಸ್ವಯ ಲಿಂಗ ನೀನೆಂದು ತಿಳುಪುವದೆ ಅ...ಹವು ಹಿಂಗದಾ ಸಚ್ಚಿದಾನಂದಬ್ರಹ್ಮಾತ್ಮಕ ತಾನೆನಲ ದುಸತ್ಯಶುದ್ಧೀದಕ್ಷೆ. ಯೀ ಸಪ್ತಕವ....ಯದೆಹುದೆ ಏಕಾಗ್ರಚಿತ್ತದೀಕ್ಷೆ. ವ್ರತನಿಯಮಂ[ಗಳಲ್ಲಿ]....ಯ ಕರಣಭಾವಾರ್ಪಿತಗಳಂ ಸರ್ವಕಾಲದೊಳು ಇಷ್ಟ ಪ್ರಾಣವಾಸ ಲಿಂಗಂ.....ದಿರ್ಪುದೆ ....ದೀಕ್ಷೆಯೆನಿಪುದು. ಆದಿಮಧ್ಯಾವ ಸಾನರಹಿತ ಶಿವ ತಾನೆ ನಲ....ಚ್ಚಿ ಬೇರ್ಪಡಿಸದಿರವೆ ಸದ್ಯೋನ್ಮುಕ್ತಿದೀಕ್ಷೆ. ಈ ಏಳನು ಭಾವಕುಪದೇಶ ಮಂ....(ಅಪೂರ್ಣ)