Index   ವಚನ - 31    Search  
 
ಮೇಲು ಹೇಮದಲ್ಲಿ ಕೀಳುಕೊಡೆ, ಅದು ತನ್ನಯ ಕೀಳು ಕೊಡೆ ಮೇಲುಮಟ್ಟವ ಮರಸಿತ್ತು. ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಲಾಗಿ, ಪ್ರಸಿದ್ಧಪ್ರಸಾದ ಸಿದ್ಧಪ್ರಸಾದವಾಯಿತ್ತು. ಒಡೆದ ಕ್ಷೀರಕ್ಕೆ ಹೆಪ್ಪನಿಕ್ಕಿದಡೆ ದಧಿಯಾಗಬಲ್ಲುದೆ? ಅರಿಯದವನ ಅರ್ಪಿತ, ಶರಧಿಯ ಹೊಯಿದ ಕರವಾಳಿನಂತಾಯಿತ್ತು. ಇಂತೀ ವಿವರದಲ್ಲಿ ಅರ್ಪಿತವನರಿಯಬೇಕು.