Index   ವಚನ - 39    Search  
 
ನಿತ್ಯ ಚಿಲಮೆಯ ನೋಡುವಾತಂಗೆ ಉಚ್ಚೆಯ ಬಚ್ಚಲ ತೋಡಲಾಗದು. ಭಕ್ತರನಲ್ಲದೆ ಭವಿಗಳ ಬೇಡೆನೆಂಬಾತಂಗೆ ಅಚ್ಚೊತ್ತಿದ ಲಕ್ಷ್ಮಿಯ ಮುದ್ರೆಯ ಹಿಡಿಯಲಾಗದು. ಕೊಂಡ ವ್ರತಕ್ಕೆ ಸಂದೇಹ ಕುಳ್ಳಿರೆ, ಅಂಗವ ಹೊರಲಾಗದು. ಇಂತಿವನರಿಯದೆ, ನಾ ವ್ರತಸ್ಥನೆಂದು ಕೊಂಡಾಡುತಿಪ್ಪ ಭಂಡರನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.