ಅಂಗ ಶಿರದ ಮಲಿನವ ಕಳೆದಲ್ಲಿ,
ಮನಕ್ಕೆ ಲಂಘನೆಯಾದಂತೆ,
ಶಿವಲಿಂಗಪೂಜೆಯ ಕೈಕೊಂಡನ್ನಬರ,
ಕಂಗಳ ಜಲ ತುಂಬುವನ್ನಬರ,
ಮನಮೂರ್ತಿ ಧ್ಯಾನ ಜಾಹೆ ಅಹನ್ನಬರ,
ಅಂಗಕ್ಕೆ ತೆರಪಿಲ್ಲದೆ, ಮನಕ್ಕೆಡೆಯಿಲ್ಲದೆ,
ಅರಿವುದಕ್ಕೆ ಹೆರೆಹಿಂಗದೆ, ಪೂಜಾಲೋಲನಾಗಿರಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Aṅga śirada malinava kaḷedalli,
manakke laṅghaneyādante,
śivaliṅgapūjeya kaikoṇḍannabara,
kaṅgaḷa jala tumbuvannabara,
manamūrti dhyāna jāhe ahannabara,
aṅgakke terapillade, manakkeḍeyillade,
arivudakke herehiṅgade, pūjālōlanāgirabēku,
īśān'yamūrti mallikārjunaliṅgavanarivudakke.