ಅರ್ಚನೆ ಪೂಜೆಯ ಕುರಿತು ಮಾಡಿದಲ್ಲಿ,
ಚತುರ್ವಿಧ ಫಲಪದಂಗಳೆಂಬವು ತನ್ನ ಹಿತ್ತಿಲ ಬೆಳೆ.
ಇಷ್ಟಾರ್ಥ ಮೋಕ್ಷ್ಯಾರ್ಥ ಕಾಮ್ಯಾರ್ಥವೆಂಬಿವು,
ತನ್ನ ಬಾಗಿಲ ನೆಟ್ಟ ಸ್ಥಾಣು.
ಇವು ಹೊರಗಾಗಿ ಮೀರಿ ಕಂಡ ತೆರ,
ಉರಿ ಕೊಂಡ ಕರ್ಪುರದಂತೆ, ಇಂತೀ ಉಭಯ ನಿಶ್ಚಯ ಪೂಜೆ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಎರವಿಲ್ಲದ ಭಾವ.