ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ,
ಆಡುವ ಚೇತನಾದಿಗಳಿರಬಲ್ಲವೆ?
ವಸ್ತುವಿನ ಸಾಕಾರವೆ ಭೂಮಿಯಾಗಿ,
ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ,
ಸಂಘಟಿಸಲಾಗಿ ಜೀವಕಾಯವಾಯಿತ್ತು.
ಇಂತೀ ರೂಪಿಂಗೆ ರೂಪುಪೂಜೆ,
ಅರಿವಿಂಗೆ ಜ್ಞಾನಪೂಜೆ.
ಉಭಯವು ನಿಂದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ.