Index   ವಚನ - 61    Search  
 
ಕಾಯ ಜೀವವನರಿದಲ್ಲಿ, ಇಷ್ಟ ಪೂಜೆಯ ಮರೆದಿರಬೇಕು. ದಿವದಲ್ಲಿ ನಡೆಯದೆ, ರಾತ್ರಿಯಲ್ಲಿ ಒರಗದೆ, ಉಭಯವನಳಿದಿದ್ದಲ್ಲಿ, ಅರ್ಪಿತವಿಲ್ಲದಿರಬೇಕು. ಸ್ತುತಿ ನಿಂದೆಗೆ ಹೊರಗಾದಲ್ಲಿ, ಋತು ಕಾಲವ ಮರೆದಿರಬೇಕು. ಮಾತಿನಲ್ಲಿ ಶೂನ್ಯ, ಆತ್ಮನಲ್ಲಿ ಆಸೆಯ ಪಾಶ. ಇಂತೀ ವೇಷದ ಚೋರರನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.