Index   ವಚನ - 77    Search  
 
ಲಿಂಗವಸ್ತುವಾದಲ್ಲಿ, ನಂಬುವ ಮನ ವಿಶ್ವಾಸವಾಗಬೇಕು. ಆಸೆವಿರಹಿತ ಗುರುವಾದಲ್ಲಿ, ಪಾಶವಿರಹಿತ ಪೂಜಿಸುವ ಶಿಷ್ಯನಾಗಬೇಕು. ಸರ್ವದೋಷನಾಶನನಾಗಿ, ಆಸೆಯೆಂಬುದು ಎಳ್ಳನಿತು ತೋರದಿದ್ದಡೆ, ಆತ ಈಶಾನ್ಯಮೂರ್ತಿ ಪೂಜಿಸುವಾತ, ಅಜಾತ ಶಂಭು. ಇಂತೀ ಉಭಯ ಏಕಮಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.