Index   ವಚನ - 78    Search  
 
ಕಿರಾತಂಗೆ ಪಿಸಿತದ ಅರೋಚಕವುಂಟೆ? ಪುಳಿಂದಂಗೆ ಶಿಶು ಬಲುಜೀವವೆಂದು ಒಲವರವುಂಟೆ? ಬೇಡುವ ಯಾಚಕಂಗೆ, ಕಾಡುವ ಗುರುಚರವೆಂದು ಹೊಟ್ಟೆಯ ಹೊರೆವಾತಂಗೆ, ಭಕ್ತ ವಿರಕ್ತರ ಆಗುಚೇಗೆಯ ಬಲ್ಲನೆ? ಇಂತೀ ಕಷ್ಟರ, ದುಷ್ಟರನೊಲ್ಲ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು.