Index   ವಚನ - 81    Search  
 
ಕಾಮವೆಂಬುದೆ ಕಂಗಳ ಮುಂದೆ ಸುಳಿದಾಡುತ್ತಿದೆ. ಕ್ರೋಧವೆಂಬುದೆ ಮನದ ಮುಂದೆ ಇಕ್ಕಿ ಹರಿದಾಡುತ್ತಿದೆ. ಲೋಭವೆಂಬುದೆ ಸರ್ವವೆಲ್ಲರಲ್ಲಿ ಬೆರಸಿ ಕುಕ್ಕುಳಗುದಿವುತ್ತಿದೆ. ಆಮಿಷ ತಾಮಸ ರಾಗದಿಂದ ಬರಿಹೊರೆ ಹೋಗುತ್ತಿದೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯದೆ.