Index   ವಚನ - 94    Search  
 
ತ್ರಿವಿಧಕ್ಕೆ ಮನ ಎಷ್ಟರಾಸೆ ಉಂಟು ಅಷ್ಟು ಬೇಕು ಗುರುಲಿಂಗಜಂಗಮವ ಪೂಜಿಸುವುದಕ್ಕೆ. ಬಾಳೆಗೆ ಫಲ ಕಡೆಯಾದಂತೆ, ಚೇಳಿಗೆ ಗರ್ಭವುದಯಿಸಿದಂತೆ, ಭಕ್ತಂಗೆ ಅಂದಂದಿಗೆ ಸಂದುದೆ ಸರಿಯಾಗಿ ನಿಂದ ಭಕ್ತನಿರವು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಿರವೆ ತಾನಾಗಿ.