Index   ವಚನ - 96    Search  
 
ಅರ್ಪಿತ ಅವಧಾನವನರಿವ ಸತ್ಯನ ನಿತ್ಯನ ಇರವು, ಮಯೂರನ ಜಾಹೆಯಂತೆ, ಪಟುಭಟನ ಎಚ್ಚರಿಕೆಯಂತೆ, ಗತಿವಾದ್ಯದಲ್ಲಿ ಮುಟ್ಟಿ ತೋರುವ ಅಂಗುಲ ಆತ್ಮದಂತೆ, ಶಿವಲಿಂಗದಲ್ಲಿ ಹಿಂಗದ ಭಾವ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ, ಸಲೆಸಂದ ಭಾವ ಹೀಗಿರಬೇಕು.