ಮಾಟ ಕೂಟವ ಮಾಡುವನ್ನಬರ
ಮನ ನಲಿದು, ತನು ಕರಗಿ ಮಾಡುವ ದ್ರವ್ಯಕ್ಕೆ
ಕೇಡಿಲ್ಲದಂತೆ ಮಾಡುತ್ತಿಪ್ಪ ಭಕ್ತನ ಅಂಗವೆ
ಎನ್ನ ಹೃದಯಾಲಯ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲಿ ತಾನಾಗಿಪ್ಪನು.
Art
Manuscript
Music
Courtesy:
Transliteration
Māṭa kūṭava māḍuvannabara
mana nalidu, tanu karagi māḍuva dravyakke
kēḍilladante māḍuttippa bhaktana aṅgave
enna hr̥dayālaya.
Īśān'yamūrti mallikārjunaliṅgavu alli tānāgippanu.