Index   ವಚನ - 102    Search  
 
ಕಲ್ಲ ತಾಗಿದ ಕಠಿಣಸರದಂತೆ, ವಲ್ಲಭನೊಲ್ಲದ ಸತಿಯಂತೆ, ಬಲ್ಲವರು ಹೇಳಿದ ಮಾತ, ಕಲ್ಲೆದೆಯವ ಕಾಣದಂತೆ, ಮಾತು ಮನಸ್ಸು ಸಿಕ್ಕಿ, ಭವವ್ಯಾಕುಲದಲ್ಲಿ ಅದೇತರ ಪೂಜೆ? ಅದೇತರ ಅರ್ಪಿತ? ಅದೇತರ ಯಾಚಕತ್ವ? ಅವ ನೇತಿಗಳೆದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.