Index   ವಚನ - 107    Search  
 
ಜಲದಲ್ಲಿ ಹುಟ್ಟಿದ ಚೇತನ, ಜಲವುಳಿದು ಜೀವಿಸಬಲ್ಲುದೆ? ಅರಿವನರಿದಲ್ಲಿ, ಕುರುಹಿನ ಮರೆಯಲ್ಲಿ, ಇದೆಯೆಂದು ತೋರಿದ ಮತ್ತೆ, ಕುರುಹುನುಳಿದು, ಅರಿವ ಪರಿಯಿನ್ನೆಂತೊ? ಆ ಉಭಯ, ಆತ್ಮದೃಷ್ಟಿಯಂತೆ.ಶಿವಲೆಂಕನ ಮಾತು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಉಂಟು ಇಲ್ಲಾ ಎಂಬಲ್ಲಿ ಹಾಕಿದ ಮುಂಡಿಗೆ.