Index   ವಚನ - 108    Search  
 
ರೂಪಿನಲ್ಲಿ ಉಂಟೆಂದು ಹೋರುವಾಗ, ಅದು ಅಚೇನಮೂರ್ತಿ. ನಿರೂಪಿನಲ್ಲಿ ಕಂಡೆನೆಂದು ಹೇಳುವಾಗ, ಅದು ನಾಮಕ್ಕೆ ಬಾರದ ಬಯಲು. ಉಭಯದಲ್ಲಿ ವಿಚಾರಿಸಿ ಕಾಬುದೊಂದೆ ತನ್ನಯ ದೃಢಚಿತ್ತ. ಆ ಚಿತ್ತ ಒಪ್ಪಿನಿಂದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ನಿಶ್ಚಯವಾಗಿರ್ಪನು.