Index   ವಚನ - 112    Search  
 
ತನುವಿನಲ್ಲಿ ಮನೋಮೂರ್ತಿಯಾಗಿ, ಜಿಹ್ವೆಯಲ್ಲಿ ರುಚಿಸುವವ ನೀನಾಗಿ, ಕರ್ಣದಲ್ಲಿ ಅವಧರಿಸಿ ಕೇಳುವವ ನೀನಾಗಿ, ನಯನದಲ್ಲಿ ಎವೆ ಹಳಚದೆ ನೋಡುವವ ನೀನಾಗಿ, ನಾಸಿಕದಲ್ಲಿ ಸುವಾಸನೆಯ ಗ್ರಹಿಸುವವ ನೀನಾಗಿ, ಪಾದ ಪ್ರಾಣಿಗಳಲ್ಲಿ ಸರ್ವಾಂಗಮುಖವಾಗಿ, ಸಕಲಸುಖಿಯಾಗಿ, ಭೋಗಮೂರ್ತಿಯಾದೆಯಲ್ಲಾ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ