ಶಿವಭಕ್ತಂಗೆ ಭೃತ್ತಾಚಾರವಳವಟ್ಟಲ್ಲಿ, ಸದಾಚಾರವಿಪ್ಪುದು.
ಸದಾಚಾರ ಸನ್ನದ್ಧವಾದಲ್ಲಿ,
ಸಮಯೋಚಿತ ಸತ್ಕ್ರಿಯೆಗಳ ಬಲ್ಲ ಸದ್ಭಕ್ತಯೆಲ್ಲಿರ್ದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲಿಪ್ಪನು.
Art
Manuscript
Music
Courtesy:
Transliteration
Śivabhaktaṅge bhr̥ttācāravaḷavaṭṭalli, sadācāravippudu.
Sadācāra sannad'dhavādalli,
samayōcita satkriyegaḷa balla sadbhaktayellirda,
īśān'yamūrti mallikārjunaliṅgavu allippanu.