Index   ವಚನ - 117    Search  
 
ಪ್ರಸಾದವ ನೆಮ್ಮಿದ ಭಕ್ತನಲ್ಲಿ, ಪರಶಿವನು ಪ್ರಸನ್ನನಾಗಿರ್ಪನು. ಪಾದತೀರ್ಥವನರಿದು ವಿಶ್ವಾಸಿಸಿಕೊಂಬ ಭಕ್ತನಲ್ಲಿ, ಆ ಪರಶಿವನು ಪರಂಜ್ಯೋತಿ ಪ್ರಕಾಶವಾಗಿಪ್ಪನು. ಸಲುವ ಸೈದಾನದ ತೆರಪನರಿದು ಬಹ ಗುರುಚರದ ಅನುವನರಿದು, ಬಂದುದಕ್ಕೂ ಸಂದುದಕ್ಕೂ ಸಂದಿಲ್ಲದೆ ನಿಂದ ಭಕ್ತನ ಅಂಗಳವೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನನ ಮಂಗಳ