ಅಂಜನದ ಬಲದಿಂದೆ
ನೆಲದ ಮರೆಯ ದ್ರವ್ಯವ ಕಾಣುವಂತೆ,
ಎನ್ನ ಚಿತ್ತಿನ ಮಧ್ಯದಲ್ಲಿ
ನಿತ್ಯ ಶಿವಜ್ಞಾನಾಂಜನವು ಪ್ರಜ್ವಲಿಸಲಾಗಿ,
ತತ್ವಾತತ್ತ್ವಂಗಳು ವ್ಯಕ್ತವಾದವು.
ಅಖಂಡೇಶ್ವರನೆಂಬ ಪರವಸ್ತುವು ಹೂಳಿರ್ದ
ಗೊತ್ತು ಕಾಣಬಂದಿತ್ತು.
Art
Manuscript
Music
Courtesy:
Transliteration
An̄janada baladinde
nelada mareya dravyava kāṇuvante,
enna cittina madhyadalli
nitya śivajñānān̄janavu prajvalisalāgi,
tatvātattvaṅgaḷu vyaktavādavu.
Akhaṇḍēśvaranemba paravastuvu hūḷirda
gottu kāṇabandittu.