Index   ವಚನ - 13    Search  
 
ಎನ್ನ ಭವಭವದಲ್ಲಿ ತೊಳಲಿಸಿ ಬಳಲಿಸಿದ ಕಾರಣವೇನಯ್ಯ? ಎನ್ನ ಸಂಸಾರಶರಧಿಯಲ್ಲಿ ಮುಳುಗಿಸಿ ಏಳುಗೊಡದೆ ಇರಿಸಿದ ಕಾರಣವೇನಯ್ಯ? ನಾನು ಮಾಡಿದ ಅಪರಾಧವೇನಯ್ಯ? ನೀವು ಮಾಡಲಾನಾದೆನಲ್ಲದೆ ಎನಗೆ ಬೇರೆ ಸ್ವತಂತ್ರವೇ ಹೇಳಾ ಅಖಂಡೇಶ್ವರಾ?