Index   ವಚನ - 15    Search  
 
ಎಂದು ಅಷ್ಟತನುಗಳು ನಿರ್ಮಿತವಾಗಿ ಪಿಂಡಾಂಡವಾದುವು, ಅಂದು ಇಂದು ಪರಿಯಂತರ ಬಂದೆನಯ್ಯ ಬಹುಜನ್ಮಂಗಳಲ್ಲಿ, ನೊಂದೆನಯ್ಯ ಸುಖದುಃಖಂಗಳಲ್ಲಿ. ಬೆಂದೆನಯ್ಯ ಸಂಸಾರ ದಳ್ಳುರಿಯಲ್ಲಿ; ಈ ಸಂಸಾರ ದಂದುಗವ ತೊಲಗಿಸಿ ನಿಮ್ಮತ್ತ ಎಳೆದುಕೊಳ್ಳಯ್ಯ ಎನ್ನ, ಅಖಂಡೇಶ್ವರಾ ನಿಮ್ಮ ಧರ್ಮ ನಮ್ಮ ಧರ್ಮ.