Index   ವಚನ - 133    Search  
 
ಎನ್ನ ತನು ಎನ್ನ ಧನ ಎನ್ನ ಮನೆ, ಎನ್ನ ಸತಿ ಸುತರೆಂಬ ಮನಕ್ಕೆ ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ! ತನ್ನಮರೆದು ಇದಿರನರಿದು ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು.