Index   ವಚನ - 140    Search  
 
ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ, ಆಶಾರ್ಥವಾಗಿ ದೀಕ್ಷೆಯ ಮಾಡಲಾಗದಯ್ಯ. ಜ್ಞಾನಾರ್ಥವಾಗಿ ಶಾಸ್ತ್ರವನೋದಬೇಕಲ್ಲದೆ, ವಾದಾರ್ಥವಾಗಿ ಶಾಸ್ತ್ರವನೋದಲಾಗದಯ್ಯ. ಮೋಕ್ಷಾರ್ಥವಾಗಿ ಶಿವಪೂಜೆಯ ಮಾಡಬೇಕಲ್ಲದೆ, ಡಂಭಾರ್ಥವಾಗಿ ಶಿವಪೂಜೆಯ ಮಾಡಲಾಗದಯ್ಯ. ಅದೆಂತೆಂದೊಡೆ: ಆಶಾರ್ಥಂ ದೀಯತೇ ದೀಕ್ಷಾ ದಂಭಾರ್ಥಂ ಪೂಜ್ಯತೇ ಶಿವಃ | ವಾದಾರ್ಥಂ ಪಠ್ಯತೇ ವಿದ್ಯಾ ಮೋಕ್ಷೋ ನಾಸ್ತಿ ವರಾನನೇ || ಧರ್ಮಾರ್ಥಂ ದೀಯತೇ ದೀಕ್ಷಾ ಮೋಕ್ಷಾರ್ಥಂ ಪೂಜ್ಯತೇ ಶಿವಃ | ಜ್ಞಾನಾರ್ಥಂ ಪಠ್ಯತೇ ವಿದ್ಯಾ ಮೋಕ್ಷಸಿದ್ಧಿರ್ವರಾನನೇ ||'' ಎಂದುದಾಗಿ, ಇಂತಪ್ಪ ಖ್ಯಾತಿ ಕೀರ್ತಿಯ ಕಡೆಗೆ ನೂಂಕಿ ನೀತಿಯ ನಿಜವನು ಅಂಗೀಕರಿಸಿ ಶಿವನನೊಲಿಸುವ ಭಾವವನರಿಯದೆ ಸಂತೆಯ ಪಸಾರದಂತೆ ಸರ್ವರು ಮೆಚ್ಚಲೆಂದು ಹಾರೈಸಿ ಹರಹಿಕೊಂಡು ಮಾಡುವ ಡಂಭಕನ ಪೂಜೆ ಶಂಭುವಿಂಗೆ ಮುಟ್ಟಲರಿಯದು ನೋಡಾ ಅಖಂಡೇಶ್ವರಾ.