Index   ವಚನ - 183    Search  
 
ಭಕ್ತನ ನಡೆ ಶುದ್ಧ, ಭಕ್ತನ ನುಡಿ ಶುದ್ಧ, ಭಕ್ತನ ತನು ಶುದ್ಧ, ಭಕ್ತನ ಮನ ಶುದ್ಧ, ಭಕ್ತನ ಭಾವ ಶುದ್ಧ, ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ, ನೀ ಒಲಿದ ಸದ್ ಭಕ್ತನ ಕಾಯವೇ ಕೈಲಾಸವಯ್ಯ.