ಒಮ್ಮೆ ನೀ ದೇವನಾದಲ್ಲಿ ನಾ ಭಕ್ತನಾಗಿರ್ಪೆನು.
ಮತ್ತೊಮ್ಮೆ ನಾ ದೇವನಾದಲ್ಲಿ ನೀವು ಭಕ್ತರಾಗಿರ್ಪಿರಿ.
ಅದೆಂತೆಂದೊಡೆ:
ಎನ್ನ ತನು ಮನ ಪ್ರಾಣೇಂದ್ರಿಯಂಗಳು
ನಿಮಗರ್ಪಿತವಾದವು.
ನಿಮ್ಮ ಮಹಾಪ್ರಸಾದವೆನ್ನೊಳಗಾಯಿತ್ತಾಗಿ
ಅಖಂಡೇಶ್ವರಾ, ನೀವೇ ಪದಾರ್ಥ
ನಾನೇ ಪ್ರಸಾದವಯ್ಯಾ.
Art
Manuscript
Music
Courtesy:
Transliteration
Om'me nī dēvanādalli nā bhaktanāgirpenu.
Mattom'me nā dēvanādalli nīvu bhaktarāgirpiri.
Adentendoḍe:
Enna tanu mana prāṇēndriyaṅgaḷu
nimagarpitavādavu.
Nim'ma mahāprasādavennoḷagāyittāgi
akhaṇḍēśvarā, nīvē padārtha
nānē prasādavayyā.