ಗಗನವೆ ಅಂಗವಾದ ಶರಣಂಗೆ ಸುಜ್ಞಾನವೆ ಹಸ್ತ;
ಆ ಹಸ್ತಕ್ಕೆ ಪರಾಶಕ್ತಿ, ಆ ಶಕ್ತಿಗೆ ಪ್ರಸಾದಲಿಂಗ,
ಆ ಲಿಂಗಕ್ಕೆ ಶ್ರವಣೇಂದ್ರಿಯವೆ ಮುಖ,
ಆ ಮುಖಕ್ಕೆ ಸುಶಬ್ದಪದಾರ್ಥ; ಆ ಪದಾರ್ಥವನು
ಕರ್ಣದಲ್ಲಿಹ ಪ್ರಸಾದಲಿಂಗಕ್ಕೆ ಆನಂದಭಕ್ತಿಯಿಂದರ್ಪಿಸಿ,
ಆ ಸುಶಬ್ದಪ್ರಸಾದವನು ಪಡೆದು ಸುಖಿಸುವಾತನೆ
ಶರಣನು ನೋಡಾ ಅಖಂಡೇಶ್ವರಾ.