Index   ವಚನ - 424    Search  
 
ಎನ್ನ ಘ್ರಾಣ ಸಮರಸವಾಯಿತ್ತಯ್ಯಾ ನಿಮ್ಮ ಗಂಧಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಜಿಹ್ವೆ ಸಮರಸವಾಯಿತ್ತಯ್ಯಾ ನಿಮ್ಮ ರುಚಿಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ತ್ವಕ್ಕು ಸಮರಸವಾಯಿತ್ತಯ್ಯಾ ನಿಮ್ಮ ಸ್ಪರ್ಶನಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಶ್ರೋತ್ರ ಸಮರಸವಾಯಿತ್ತಯ್ಯಾ ನಿಮ್ಮ ಶಬ್ದಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಹೃದಯ ಸಮರಸವಾಯಿತ್ತಯ್ಯಾ ನಿಮ್ಮ ತೃಪ್ತಿಪ್ರಸಾದವ ಗ್ರಹಿಸಿ ನಿಮ್ಮೊಳಗೆ. ಎನ್ನ ಸರ್ವಾಂಗ ಸಮರಸವಾಯಿತ್ತಯ್ಯಾ ನಿಮ್ಮ ಮಹಾಪ್ರಸಾದವ ಗ್ರಹಿಸಿ ನಿಮ್ಮೊಳಗೆ ಅಖಂಡೇಶ್ವರಾ.