ಪರಾತ್ಪರವಾದ ವಸ್ತುವನೊಡಗೂಡಿದ ಪ್ರಾಣಲಿಂಗಿಯ
ಒಡಲ ಬೆಡಗಿನ ಗಡಣವೆಂತಿರ್ಪುದೆಂದಡೆ:
ಸ್ಫಟಿಕದ ಘಟದೊಳಗೆ ಜ್ಯೋತಿಯನಿರಿಸಿದಂತೆ,
ಕತ್ತಲೆಯ ಮನೆಯಲ್ಲಿ ರತ್ನವ ಹರಡಿದಂತೆ,
ರನ್ನದ ಗಿರಿಗೆ ರವಿಕೋಟಿ ಕಿರಣಂಗಳು ಮುಸುಕಿದಂತೆ,
ಬೆಳಗು ಹಳಚಿದ ಮಹಾಬೆಳಗಿನೊಬ್ಬುಳಿಯನೊಳಕೊಂಡು
ಘನಗಂಭೀರವಾದ ಪ್ರಾಣಲಿಂಗಿಗಳ ಪಾದಕಮಲದಲ್ಲಿ
ಸದಮಲ ತುಂಬಿಯಾಗಿರಿಸಯ್ಯಾ ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Parātparavāda vastuvanoḍagūḍida prāṇaliṅgiya
oḍala beḍagina gaḍaṇaventirpudendaḍe:
Sphaṭikada ghaṭadoḷage jyōtiyanirisidante,
kattaleya maneyalli ratnava haraḍidante,
rannada girige ravikōṭi kiraṇaṅgaḷu musukidante,
beḷagu haḷacida mahābeḷaginobbuḷiyanoḷakoṇḍu
ghanagambhīravāda prāṇaliṅgigaḷa pādakamaladalli
sadamala tumbiyāgirisayyā enna akhaṇḍēśvarā.