Index   ವಚನ - 460    Search  
 
ಆಕಾಶಮಂಡಲದೊಳಗೆ ಲೋಕೇಶನ ಪಟ್ಟಣವಿರ್ಪುದು ನೋಡಾ. ಆ ಪಟ್ಟಣಕ್ಕೆ ನಾಲ್ಕು ಬಾಗಿಲು, ಎಂಟು ಬೀದಿ, ಹದಿನಾರು ಚದುರಂಗದ ಚಾವಡಿ, ಮೂವತ್ತೆರಡು ಕೇರಿ. ಕೇರಿಗಳೊಳಗೆ ಪರಿಕಾರರ ಕಟ್ಟಳೆ ನೋಡಾ! ಆಕಾಶಮಂಡಲವನಡರಿ, ಲೋಕೇಶನ ಕಂಡಾತಂಗಲ್ಲದೆ ಆ ಪಟ್ಟಣವು ಆರಿಗೂ ಸಾಧ್ಯವಿಲ್ಲ ನೋಡಾ ಅಖಂಡೇಶ್ವರಾ.