Index   ವಚನ - 540    Search  
 
ಬೀಜದೊಳಗೆ ಅಂಕುರವಿರ್ಪುದು. ಅಂಕುರದೊಳಗೆ ಬೀಜವಿರ್ಪುದು. ಅಂಕುರ ಬೀಜವೆಂದು ಹೆಸರು ಎರಡಾದಡೇನು? ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ ಬಸವಣ್ಣನೆ ಶಿವನು, ಶಿವನೆ ಬಸವಣ್ಣನು. ಬಸವಣ್ಣ ಶಿವನೆಂಬ ಹೆಸರೆರಡಾದಡೇನು? ಅಖಂಡವಸ್ತು ಒಂದೇ ಆದಕಾರಣ, ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ ದೇವರದೇವಾ.