Index   ವಚನ - 646    Search  
 
ಶರಣಲಿಂಗಕ್ಕೆ ನೋಡುವ ಕಣ್ಣು, ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ಕೇಳುವ ಶ್ರೋತ್ರ, ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ವಾಸಿಸುವ ನಾಸಿಕ, ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ರುಚಿಸುವ ಜಿಹ್ವೆ, ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ಸೋಂಕುವ ತ್ವಕ್ಕು, ಒಂದಲ್ಲದೆ ಎರಡಿಲ್ಲ ಕಾಣಿರೊ. ಶರಣಲಿಂಗಕ್ಕೆ ನೆನೆವ ಮನ, ಒಂದಲ್ಲದೆ ಎರಡಿಲ್ಲ ಕಾಣಿರೊ. ನಮ್ಮ ಅಖಂಡೇಶ್ವರನಲ್ಲಿ ಒಡವೆರೆದ ಶರಣಲಿಂಗಕ್ಕೆ ಅಂಗ ಪ್ರಾಣಂಗಳೊಂದಲ್ಲದೆ ಎರಡಿಲ್ಲ ಕಾಣಿರೊ.