ಅಂಕುರ ಪಲ್ಲವ ತರು ಕುಸುಮಫಲರಸಸಾರಾಯ ಇನಿತಿನಿತೆಲ್ಲಿದುದೊ,
ಬೀಜ ಮೊಳೆದೋರದಂದು?
ನಾಭಿಗಳೆಯದ ಪಶುವಿನ ಅಮೃತವೆಲ್ಲಿದ್ದುದೊ,
ವೃಷಭ ಮುಟ್ಟದಂದು?
ಘನಕುಚ ಯೌವನೆಯರ ರಜಪ್ರಶ್ನೆಯಲ್ಲಿ
ಒದಗಿದ ಹಸುಗೂಸು ಎಲ್ಲಿದ್ದುದೂ,
ಕೊಡಗೂಸು ಕನ್ಯೆಯಳಿಯದಂದು?
ತ್ರಿಜಗದ ಉತ್ಪತ್ಯ, ಸಚರಾಚರದ ಗಂಭೀರವೆಲ್ಲಿದ್ದುದೊ,
ಶಿವನ ಅಷ್ಟತನುಮೂರ್ತಿಗಳಿಲ್ಲದಂದು?
ಸಪ್ತಸ್ವರ ಬಾವನ್ನಕ್ಷರವೆಲ್ಲಿದ್ದುದೊ,
ಜ್ಞಾನ ಉದಯಿಸದಂದು?
ಶರಧಿಯೊಳಗಣ ರತ್ನವೆಲ್ಲಿದ್ದುದೊ,
ಸ್ವಾತಿಯ ಸಲಿಲವೆರಗದಂದು?
ಶರಣಪಥ ಲಿಂಗೈಕ್ಯವೆಲ್ಲಿದ್ದುದೊ,
ಆರಾಧ್ಯ ಸಕಳೇಶ್ವರದೇವರು ಕರುಣಿಸಿ
ಕಣ್ದೆರೆದು ತೋರದಂದು?
Art
Manuscript
Music
Courtesy:
Transliteration
Aṅkura pallava taru kusumaphalarasasārāya initinitellidudo,
bīja moḷedōradandu?
Nābhigaḷeyada paśuvina amr̥tavelliddudo,
vr̥ṣabha muṭṭadandu?
Ghanakuca yauvaneyara rajapraśneyalli
odagida hasugūsu elliddudū,
koḍagūsu kan'yeyaḷiyadandu?
Trijagada utpatya, sacarācarada gambhīravelliddudo,
śivana aṣṭatanumūrtigaḷilladandu?
Saptasvara bāvannakṣaravelliddudo,
jñāna udayisadandu?
Śaradhiyoḷagaṇa ratnavelliddudo,
svātiya salilaveragadandu?
Śaraṇapatha liṅgaikyavelliddudo,
ārādhya sakaḷēśvaradēvaru karuṇisi
kaṇderedu tōradandu?