Index   ವಚನ - 4    Search  
 
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂದು ನಿಚ್ಚನಿಚ್ಚ ಹುಸಿವರು ನೋಡಾ. ವಾಯು ಬೀಸುವಲ್ಲಿ, ಬಯಲು ಬೆರಸುವಲ್ಲಿ, ಭಾಜನಸಹಿತಭೋಜನವುಂಟೆ? ಅಂಗಕ್ಕೆ ಬಂದ ಸುಖವು, ಲಿಂಗವಿರಹಿತವಾದಡೆ ಸ್ವಯವಚನ ವಿರೋಧ. ಸಕಳೇಶ್ವರದೇವನು ಆಳಿಗೊಂಡು ಕಾಡುವ.