ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು,
ನಿನಗೆ ಕೊಡುವೆನೆಂದವಧಾನಿಸುವನ್ನಬರ,
ಎನಗೂ ಇಲ್ಲದೆ ಹೋಯಿತ್ತು,
ನಿನಗೂ ಇಲ್ಲದೆ ಹೋಯಿತ್ತು.
ಈ ಭೇದಬುದ್ಧಿಯು ಬಿಡಿಸಿ,
ಆನರಿದುದೆ ನೀನರಿದುದೆಂಬಂತೆ
ಎಂದಿಂಗೆನ್ನನಿರಿಸುವೆಯಯ್ಯ ಸಕಳೇಶ್ವರಾ.
Art
Manuscript
Music
Courtesy:
Transliteration
Enage sōṅkida sakalarucipadārthaṅgaḷanu,
ninage koḍuvenendavadhānisuvannabara,
enagū illade hōyittu,
ninagū illade hōyittu.
Ī bhēdabud'dhiyu biḍisi,
ānaridude nīnaridudembante
endiṅgennanirisuveyayya sakaḷēśvarā.