Index   ವಚನ - 28    Search  
 
ಎನಗೆ ನೀನು ಮಾಡಿದ ಸಂಸಾರದ ಬಳಲಿಕೆ, ನಿನಗೆನ್ನ ಕಾಡುವ ಬಳಲಿಕೆ. ಬಳಲಿಕೆಯಿಬ್ಬರಿಗೆಯೂ ಸರಿ. ನಿನ್ನ ಹೆಚ್ಚೇನು? ಎನ್ನ ಕುಂದೇನು? ನೀನು ಭಕ್ತದೇಹಿಕದೇವನಾದ ಬಳಿಕ! ಸಕಳೇಶ್ವರದೇವ ನೀನೂ ಬಲ್ಲೆ , ನಾನೂ ಬಲ್ಲೆ.