Index   ವಚನ - 30    Search  
 
ಎನ್ನ ಈ ಸಂಸಾರದ ಬಾಳುವೆ ನೆಲೆಯಿಲ್ಲ ಕಂಡಾ! ಆದಡೆ, ಶಿವನೆ ನೀನು ಕಾಡುವ ಕಾಟ ನೆಲೆಯಿಲ್ಲ. ಸಂಸಾರದ ಕೂಡೆ ಕಾಡುವುದು ಲಯ. ಇಂತೀ ಎರಡೂ ಲಯವಾದಡೆ ನಾನು ನೀನೂ ಕೂಡಿ ನಿತ್ಯರಾಗಿ ಸುಖಿಯಿಸುವ, ಸಕಳೇಶ್ವರದೇವಾ.