Index   ವಚನ - 29    Search  
 
ಎನಗೆ ಸೋಂಕಿದ ಸಕಲರುಚಿಪದಾರ್ಥಂಗಳನು, ನಿನಗೆ ಕೊಡುವೆನೆಂದವಧಾನಿಸುವನ್ನಬರ, ಎನಗೂ ಇಲ್ಲದೆ ಹೋಯಿತ್ತು, ನಿನಗೂ ಇಲ್ಲದೆ ಹೋಯಿತ್ತು. ಈ ಭೇದಬುದ್ಧಿಯು ಬಿಡಿಸಿ, ಆನರಿದುದೆ ನೀನರಿದುದೆಂಬಂತೆ ಎಂದಿಂಗೆನ್ನನಿರಿಸುವೆಯಯ್ಯ ಸಕಳೇಶ್ವರಾ.