ಕಿವಿಯಲ್ಲಿ ಕೀಟಕ, ಕೊರಳಲೊಂದೊದರು.
ತಲೆಯಲ್ಲಿ ಹುಳಿತದೊಂದೇರು.
ನೋವರಿಯದೆ ವಿಷಯಕ್ಕೆ ಹರಿವುದು ಸೊಣಗನು.
ಬೆನ್ನಹೇರು ನೆಲಕ್ಕೆ ನೂಕಲು,
ಬರವೆಯ ಕಾಗೆ ಬಂದಿರಿಯಲು,
ನೋವನರಿಯದೆ ವಿಷಯಕ್ಕೆ ಹರಿವುದು ಗಾರ್ದಭನು.
ಹರೆಯ ಶಬುದಕ್ಕೆ, ಬೊಬ್ಬೆಯ ರಭಸಕ್ಕೆ
ತೊಟ್ಚಂಬು ತೊಟ್ಟುರ್ಚಿ ಬೀಳಲು,
ನೋವನರಿಯದೆ ವಿಷಯಕ್ಕೆ ಹರಿವುದು ಹರಿಣನು.
ಸಕಳೇಶ್ವರದೇವಾ, ನೀ ಮಾಡಿದ ಮಾಯೆ,
ಆರಾರನಾಯತಗೆಡಿಸದೊ?
Art
Manuscript
Music
Courtesy:
Transliteration
Kiviyalli kīṭaka, koraḷalondodaru.
Taleyalli huḷitadondēru.
Nōvariyade viṣayakke harivudu soṇaganu.
Bennahēru nelakke nūkalu,
baraveya kāge bandiriyalu,
nōvanariyade viṣayakke harivudu gārdabhanu.
Hareya śabudakke, bobbeya rabhasakke
toṭcambu toṭṭurci bīḷalu,
nōvanariyade viṣayakke harivudu hariṇanu.
Sakaḷēśvaradēvā, nī māḍida māye,
ārāranāyatageḍisado?