Index   ವಚನ - 47    Search  
 
ಕಾಲವಶದಿಂದ ಕಾಲನೆಡಹಿದಡೆ, ಹಾಲುಗುಡಿದಂತೆ ಪರಿಣಾಮಿಸಬೇಕು. ಕಾಲಕ್ಕೆ ಬೇಸತ್ತು ಬೆಂಬೀಳಲಾಗದು. ಕಾಲ ಮುನ್ನಾದಿಯಲ್ಲಿ ಬಂದುದಯ್ಯ! ಕಾಲನ ಬಾಯಿಗೆ ಒಳಗಾಗದ ಮುನ್ನ, ಕಾಲಾಂತಕ ಸಕಳೇಶ್ವರದೇವ ಶರಣೆಂದು ಬದುಕಿರಯ್ಯಾ.