ಚಂದ್ರೋದಯದಲುಂಬ ಚಕೋರಗೋಗರವ ಹಾಕಿ,
ಬಸುರ ಬಡಿದುಕೊಂಡು ಉಣ್ಣದೆಂದಳುವರು ನೋಡಾ.
ಲೋಕದ ಚಿಂತೆಯನನಂತವನಾಡುವರಲ್ಲದೆ,
ತಮ್ಮ ಚಿಂತೆಯನಾಡುವರೊಪ್ಪಚ್ಚಿಯೂ ನೋಡಾ.
ಮಹಂತ ಸಕಳೇಶ್ವರದೇವಾ,
ನಿಮ್ಮ ಶರಣರ ನಿಲವಿಂಥಾದಯ್ಯಾ.
Art
Manuscript
Music
Courtesy:
Transliteration
Candrōdayadalumba cakōragōgarava hāki,
basura baḍidukoṇḍu uṇṇadendaḷuvaru nōḍā.
Lōkada cinteyananantavanāḍuvarallade,
tam'ma cinteyanāḍuvaroppacciyū nōḍā.
Mahanta sakaḷēśvaradēvā,
nim'ma śaraṇara nilavinthādayyā.