Index   ವಚನ - 56    Search  
 
ಚಿಕ್ಕಟು ಕಡಿದಡೇನು ಮನಕ್ಕತಿಯರಿಯದು. ಹೊಕ್ಕು ಹರಿದಡೇನು ಹೊಲನ ಮೇಯಲರಿಯದು. ಮಕ್ಕಳ ಹಡೆದಡೇನು ಒಕ್ಕಲೂರಾಗದು. ಲೆಕ್ಕಕ್ಕೊಂದೈನೂರಿದ ಡೇತಕೆ ಬಾತೆಯಯ್ಯಾ! ಮಿಕ್ಕ ಕುಕವಿಗಳ ಅರೆವಚನ, ಹೊಲದ ಕುಕ್ಕತೆನೆಯಾದಂತೆ ಕಾಣಾ, ಸಕಳೇಶ್ವರದೇವಾ.