Index   ವಚನ - 55    Search  
 
ಚಂದ್ರೋದಯದಲುಂಬ ಚಕೋರಗೋಗರವ ಹಾಕಿ, ಬಸುರ ಬಡಿದುಕೊಂಡು ಉಣ್ಣದೆಂದಳುವರು ನೋಡಾ. ಲೋಕದ ಚಿಂತೆಯನನಂತವನಾಡುವರಲ್ಲದೆ, ತಮ್ಮ ಚಿಂತೆಯನಾಡುವರೊಪ್ಪಚ್ಚಿಯೂ ನೋಡಾ. ಮಹಂತ ಸಕಳೇಶ್ವರದೇವಾ, ನಿಮ್ಮ ಶರಣರ ನಿಲವಿಂಥಾದಯ್ಯಾ.