ಧಾತುಗೆಟ್ಟು ಬೋಳಾದಡೆ,
ನಿಜವನೆಯಲುಬಲ್ಲುದೆ ಅಯ್ಯಾ?
ವಿಕೃತವೇಷವ ತೋರಿ,
ಉದರ ಹೊರೆವುದಕ್ಕೆಂತಯ್ಯಾ?
ಉಪಾಧಿವಿಡಿದು ಮಾಡುವ ಷೋಡಶಕ್ರೀ,
ಸಕಳೇಶ್ವರದೇವಂಗೆ ದೂರವಯ್ಯಾ.
Art
Manuscript
Music
Courtesy:
Transliteration
Dhātugeṭṭu bōḷādaḍe,
nijavaneyaluballude ayyā?
Vikr̥tavēṣava tōri,
udara horevudakkentayyā?
Upādhiviḍidu māḍuva ṣōḍaśakrī,
sakaḷēśvaradēvaṅge dūravayyā.